ಸತ್ಯಜಿತ್ ಸುರತ್ಕಲ್

ಸತ್ಯಜಿತ್ ಸುರತ್ಕಲ್

 ಕರಾವಳಿ ಧರ್ಮದ ಉಳಿವಿಗಾಗಿ ಮತ್ತು ಮಣ್ಣಿನ ಘನತೆಗಾಗಿ ಎಂದಿಗೂ ರಾಜಿ ಆದ ಇತಿಹಾಸವೇ ಇಲ್ಲ. ಉಳಿವಿಗಾಗಿ ಮತ್ತು ಘನತೆಗಾಗಿ ರಕ್ತವನ್ನೇ ಚೆಲ್ಲಿ, ಅದರಲ್ಲಿಯೇ ಶುದ್ಧ ಮಾಡಿದ ಪರಂಪರೆಯ ಹಿನ್ನೋಟವೇ ನಮ್ಮ ಮುಂದೆ ಇದೆ.

ಧರ್ಮದ ಮೇಲೆ ನಡೆಯುವ ಪೈಶಾಚಿಕ ಘಟನೆಗಳು ನಮ್ಮನ್ನು ಒಗ್ಗಟ್ಟು ಮಾಡುವುದಕ್ಕಿಂತ, ಅದನ್ನು ಎದುರಿಸಿ, ತಡೆದು ಅದರ ವಿರುದ್ಧ ಒಗ್ಗಟ್ಟು ಪ್ರದರ್ಶನ ಮಾಡುವಂತೆ ಮಾಡುವ ನಾಯಕನಿರುವಾಗ ಮಾತ್ರ ನಾವು ಇನ್ನು ಬಲಾಢ್ಯರಾಗುತ್ತೇವೆ.! ಮತ್ತೇ ಎದ್ದೇಳುತ್ತೇವೆ.!

    ಸಂಘಟನೆ ಮತ್ತು ಒಂದು ಬಲಾಢ್ಯ ಯುವ ಸಮುದಾಯವನ್ನು ಚಾಕಚಕ್ಯತೆಯಿಂದ ಮುನ್ನಡೆಸಿಕೊಂಡು ಹೋಗುವ ವಿಶಾಲ ಮತ್ತು ನಿಸ್ವಾರ್ಥ ಗುಣವೇ ನಾಯಕನಿಗಿರುವ ಶಕ್ತಿ. ಯಾವುದೇ ಕಠಿಣ ಸಂದರ್ಭ ಎದುರಾದರೂ ಅದನ್ನು ಚಾಣಾಕ್ಷತನದಿಂದ ಎದುರಿಸಿ, ತನ್ನ ಜೊತೆ ಇರುವ ಸಂಘಟನಾ ಸದಸ್ಯರ ಬೆನ್ನಿಗೆ ನಿಲ್ಲುವಂತಹ ಗುಣ,ಅವಮಾನಗಳಿಗೆ, ಬೆದರಿಕೆಗಳಿಗೆ ಸ್ಪಷ್ಟ ಮತ್ತು ಕಠಿಣ ಸಂದೇಶ ನೀಡುವ ವ್ಯಕ್ತಿತ್ವ ನಮ್ಮ ಸತ್ಯಣ್ಣನಲ್ಲಿದೆ.!

    ಸತ್ಯಣ್ಣ.!!!( ಸತ್ಯಜಿತ್ ಸುರತ್ಕಲ್) ಈ ಹೆಸರು ಕೇಳಿದಾಗಲೇ ಧನಾತ್ಮಕ ಅಂಶಗಳು ಮತ್ತು ಅಣ್ಣನ ನೇತೃತ್ವದಲ್ಲಿ ನಡೆದ ಹಲವು ಹೋರಾಟದ ಪ್ರಮುಖ ಘಟನೆಗಳು ಕಣ್ಣ ಮುಂದೆಯೇ ತನ್ನ ಚಿತ್ರವನ್ನು ಒಂದೇ ಚಿತ್ರದಲ್ಲಿ ವಿವರಿಸುತ್ತದೆ.

    ವಾಸುದೇವ ಮತ್ತು ಭಾರತೀಯವರ ಮಗನಾಗಿ ಸುರತ್ಕಲ್ನಲ್ಲಿ ಜನಿಸಿದ ಇವರು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ವಿಧ್ಯಾದಾಯಿನಿ ಸಂಸ್ಥೆ ಸುರತ್ಕಲ್ ನಲ್ಲಿ ಪಡೆದು,  ಗೋವಿಂದದಾಸ ಕಾಲೇಜಿನಲ್ಲಿ ಬಿ.ಎಸ್.ಸಿ ಪದವಿಯನ್ನು ಪಡೆದರು.

  11ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ ತನ್ನ ಪುಟ್ಟ ದಾಪುಗಾಲನ್ನು ಇಡುವಾಗಲೇ ಕರಾವಳಿಗೆ ಒಬ್ಬ ಬಲಿಷ್ಟ ಹಿಂದೂ ನಾಯಕನ ಬೆಳವಣಿಗೆಗೆ ಆರ್.ಎಸ್.ಎಸ್. ಎಲ್ಲವನ್ನು ನೀಡಿತ್ತು. ಸಂಘದ ಎಲ್ಲಾ ಸಿದ್ಧಾಂತಗಳಿಗೆ ಶಿರಬಾಗಿ, ಎಲ್ಲಕ್ಕಿಂತ ದೇಶ ಮತ್ತು ಧರ್ಮ ದೊಡ್ಡದು ಎಂಬ ಧ್ಯೇಯ ವ್ಯಾಕ್ಯವೇ ಅಣ್ಣನಲ್ಲಿ ಬೇರೂರಿತ್ತು. ತನ್ನ ಕಾಲೇಜು ಶಿಕ್ಷಣದ ಜೊತೆಗೆ ಸಂಘದ ಎಲ್ಲಾ ಕಾರ್ಯಗಳಲ್ಲಿ ತಲ್ಲೀನನಾಗಿ ನಿಷ್ಠೆಯಿಂದ ಕಾರ್ಯಗತಗೊಳಿಸುವಲ್ಲಿ ಶ್ರಮಿಸುತ್ತಿದ್ದರು.

    ಸತ್ಯಣ್ಣನ ನಾಯಕತ್ವ ಗುಣ ಮತ್ತು ನಿಸ್ವಾರ್ಥತೆಯ ಮಜಲು ಸಂಘದ ಪ್ರಾಥಮಿಕ ಸಂಘಟಕರಿಗೆ ತಿಳಿದು ಇವರನ್ನು ಸುರತ್ಕಲ್ ನಗರದ ಪ್ರವಾಸಿ ಕಾರ್ಯಕರ್ತನಾಗಿ ನೇಮಿಸಿತು. ಹಾಗೆಯೇ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ(A.B.V.P) ವಿದ್ಯಾರ್ಥಿ ನಾಯಕನಾಗಿಯೂ ಆಯ್ಕೆಗೊಂಡರು. ಅನೇಕ ವಿದ್ಯಾರ್ಥಿಗಳ ಪರ ಹೋರಾಟಗಳಲ್ಲಿ ಭಾಗವಹಿಸಿ ಅದರಲ್ಲೂ ಸಫಲತೆಯ ಜೊತೆಗೆ  ಕರಾವಳಿಯ ಧ್ವನಿಯ ಧ್ವನಿಗೆ ಧ್ವನಿಯಾಗುವಂತಹ ಒಂದು ಧ್ವನಿ ಮೆಲ್ಲನೆ ದೇಶಕ್ಕೆ ಗೊತ್ತಾಗುವಂತೆ ಬೆಳೆದಿತ್ತು.!

    ಸತ್ಯಜಿತ್ ಸುರತ್ಕಲ್ ಅಣ್ಣನ ಹೆಸರನ್ನು ಮತ್ತು ಸಂಘಟಿತನಾಗಿ ದೇಶದಲ್ಲೇ ಗುರುತಿಸುವಂತೆ ಮಾಡಿದ್ದೇ 1994 ರ ಹುಬ್ಬಳ್ಳಿಯ ಈದ್ಗಾ ಮೈದಾನದ ಘಟನೆ. ಕರಾವಳಿಯಲ್ಲಿ ಮಾತ್ರವಲ್ಲದೆ ದೇಶದಲ್ಲಿ ಹುಬ್ಬಳಿಯ ಘಟನೆ ಜನತೆಯಲ್ಲಿ ದೇಶ ಭಕ್ತಿಯನ್ನು ಹೆಚ್ಚಿಸುವಂತೆ ಮಾಡಿತ್ತು.!! ಭಾರತೀಯ ಜನತಾ ಪಾರ್ಟಿಯ ಬೆಳವಣಿಗೆಗೆ ಕರ್ನಾಟಕದಲ್ಲಿ ಮತ್ತು ಕರಾವಳಿಯಲ್ಲಿ ಹೊಸ ವೇಗವನ್ನು ಕೊಟ್ಟಿತು ಎಂದರೆ ತಪ್ಪಾಗಲಾರದು.ಬಿ.ಜೆ.ಪಿ ಭದ್ರವಾಗಿ ನೆಲೆಯೂರಲು ಈ ಘಟನೆ ಒಂದು ವೇದಿಕೆಯನ್ನು ನಿರ್ಮಿಸಿತು.!

 ಸತ್ಯಣ್ಣ ತನ್ನ 24 ರ ಹರೆಯದಲ್ಲಿ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ದೊಡ್ಡ ಕೈಂಕರ್ಯಕ್ಕೆ ಕಲ್ಲಡ್ಕ ಪ್ರಭಾಕರ ಭಟ್ಟರ ನೇತೃತ್ವದಲ್ಲಿ ಸಿದ್ದರಾದರು. ಪೋಲಿಸರ ಸರ್ಪಗಾವಲು ಮೈದಾನಕ್ಕೆ ಹೇಗಿತ್ತೆಂದರೆ ಒಂದು ಇರುವೆಯು ಒಳ ಪ್ರವೇಶಿಸಬೇಕೆಂದರೆ ತಪಾಸಣೆ ಅನಿವಾರ್ಯವಾಗಿತ್ತು, ಅದನ್ನು ಭೇದಿಸಿ ಒಳ ಪ್ರವೇಶಿಸುವುದು ಕಷ್ಟದ ಕೆಲಸವೇ ಆಗಿತ್ತು.2 ದಿನಗಳ ಕಾಲ ನಿಗೂಢ ಸ್ಥಳದಲ್ಲಿ ವಾಸವಿದ್ದ ಇವರು ಬ್ರೆಡ್ ಮತ್ತು ಸಕ್ಕರೆಯೇ ಇವರ ಆಹಾರವಾಗಿತ್ತು.ದೈನಂದಿನ ದಿನಚರಿಗೂ ಕಷ್ಟವಾಗಿತ್ತು. ಹೊರ ಬಂದರೆ ಪೋಲಿಸರ ಗುಂಡೇಟಿಗೆ ಬಲಿಯಾಗುವ ಎಲ್ಲಾ ಅವಕಾಶವು ಎದ್ದು ಕಾಣುತ್ತಿತ್ತು. ಅನಂತ್ ಕುಮಾರ್ ಹೆಗಡೆ, ಸತ್ಯಣ್ಣ ಮತ್ತು ನಾಲ್ಕು-ಐದು ಜನ ಸ್ವಯಂ ಸೇವಕರು ಪೋಲಿಸರ ಎಲ್ಲಾ ಸರ್ಪಗಾವಲನ್ನು ದಾಟಿ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿಯೇ ಬಿಟ್ಟರು..! ತ್ರಿವರ್ಣ ಧ್ವಜ ಎಲ್ಲಾ ಅಡೆತಡೆಗಳನ್ನು ದಾಟಿ ವಿರಾಜಮಾನೆಯಾಗಿ ನೆಲೆಯೂರಿ ಬಿಟ್ಟಳು. ಈ ಘಟನೆ ಕಾಡ್ಗಿಚ್ಚಿನಂತೆ ದೇಶದ ಮೂಲೆ-ಮೂಲೆಗೆ ಪಸರಿಸಿತು. ಕರಾವಳಿಯ ದೇಶ ಪ್ರೇಮದ ಜೊತೆಗೆ ಸತ್ಯಣ್ಣನ ಹೆಸರು ಮನೆ-ಮನಗಳಲ್ಲಿ ನೆಲೆಯೂರಿತು.( ಈ ಘಟನೆ ಬರೆಯುವಾಗ ಸ್ವಾತಂತ್ರ್ಯ ಹೋರಾಟದ ಘಟನೆಯ ಮರು ಚಿತ್ರ ಬಂದಾಗೆ ಆಗಿತ್ತು.)

     ಹಿಂದೂ ಜಾಗರಣ ವೇದಿಕೆ ಎಂಬ ಬಹು ದೊಡ್ಡ ಸಂಘಟನೆಯ ನೇತೃತ್ವ ವಹಿಸಿದ ಅಣ್ಣ, ಅನೇಕ ಹೋರಾಟಗಳನ್ನು ಕೆಚ್ಚೆದೆಯಿಂದ ಮಾಡಿ ತೋರಿಸಿದರು. ಹಿಂದು ಹುಡುಗಿಯರನ್ನು ಮೋಸದ ಜಾಲಕ್ಕೆ ಬೀಳಿಸುವ ಲವ್ ಜಿಹಾದ್, ಮತಾಂತರದ ವಿರುದ್ಧ ಸಾರ್ವಜನಿಕವಾಗಿ ಬಹಿರಂಗವಾಗಿ ಮಾತನಾಡಿದ ಮೊದಲಿಗರಲ್ಲಿ ಮೊದಲಿನ ಸಾಲಿನಲ್ಲಿ ಸತ್ಯಣ್ಣ ನಿಲ್ಲುತ್ತಾರೆ.

   1993ರಲ್ಲಿ ನಡೆದ ಲವ್ ಜಿಹಾದಿನ ಪ್ರಕರಣದ ವಿರುದ್ಧ ನಡೆದ ಹೋರಾಟದಲ್ಲಿ ಸತ್ಯಣ್ಣನ ನೇತೃತ್ವ, ಒಂದು ಹೊಸ ಮೈಲಿಗಲ್ಲಿನ ಜೊತೆಗೆ ನಮ್ಮವರಲ್ಲಿ ಧೈರ್ಯ ತುಂಬಿದರು.

ಸತ್ಯಣ್ಣ ಆಗಲೇ ಮತಾಂದರ ಹೃದಯದಲ್ಲಿ ಭಯದ ಕಿಡಿಯನ್ನು ಹೊತ್ತಿಸಿದ್ದರು.1996ರಲ್ಲಿ ಭಟ್ಕಳದಲ್ಲಿ ನಡೆದ ಒಂದು ಘಟನೆಯ ಕುರಿತು ನ್ಯಾಯಾಂಗ ತನಿಖೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು.ಅದರಲ್ಲೂ ಸಫಲತೆಯನ್ನು ಕಂಡು ಭಟ್ಕಳದಲ್ಲೂ ಸತ್ಯಜಿತ್ ಸುರತ್ಕಲ್ ಎನ್ನುವ ಹೆಸರು ಪ್ರತೀ ಮನದಲ್ಲಿ ನೆಲೆಯೂರಿತು.

    ಮಂಗಳೂರಿಗೆ MRPL ಎಂಬ ಪೆಟ್ರೋಲ್ ಶುದ್ಧೀಕರಣ ಘಟಕ ತನ್ನ ಕಾರ್ಯ ಯೋಜನೆಯನ್ನು ವಿಸ್ತರಿಸಲು ಭೂಮಿಯನ್ನು ಎದುರು ನೋಡುತ್ತಿತ್ತು. ಕಡಲಿನ ಬದಿಯಲ್ಲಿ ನಿರ್ಮಾಣವಾಗುವ ಈ ಯೋಜನೆಯ ವಿರುದ್ಧ ಮೊಗವೀರರು ತಿರುಗಿ ಬಿದ್ದರು. ಮೊಗವೀರ ಸಮುದಾಯದ ಜನರ ಜೊತೆ ಸತ್ಯಣ್ಣ ಕೈ ಜೋಡಿಸಿದರು.

   ಸತ್ಯಣ್ಣ ಪ್ರಬಲ ಹಿಂದು ನಾಯಕನಾಗಿ ಹೊರ ಹೊಮ್ಮುವುದನ್ನು ಕಂಡು ಕೆಲವು ಪಟ್ಟಭದ್ರ ಮತಾಂಧ ಶಕ್ತಿಗಳು ಒಳ-ಒಳಗೆ ವಿಷಕಾರಲು ಪ್ರಯತ್ನಿಸಿದವು. ಇದನ್ನು ಅರಿತ ಅಂದಿನ ಗುಪ್ತಚರ ಇಲಾಖೆ ಸತ್ಯಣ್ಣನಿಗೆ ಗನ್ ಮ್ಯಾನ್ ನೀಡುವ ಕುರಿತು ಆದೇಶವನ್ನು ಕೂಡ ನೀಡಿತ್ತು.!

  ಹಿಂದೂ ಕಾರ್ಯಕರ್ತರಿಗೆ ತೊಂದರೆ ಆದಾಗ ನಡು ರಾತ್ರಿಯಲ್ಲೂ ಎದ್ದು ಅವರ ನೆರವಿಗೆ ನಿಂತಂತಹ ಅನೇಕ ಉದಾಹರಣೆಗಳು ಕಣ್ಣ ಮುಂದೆಯೇ ಇದೆ. ಕೆಲವು ಕೇಸಿನ ಮುಖಾಂತರ ಜೈಲು ಸೇರಿದ ಅನೇಕ ಯುವಕರ ಮನೆಗೆ ಆರ್ಥಿಕ ಸಹಾಯದ ಜೊತೆಗೆ ಧೈರ್ಯವನ್ನು ತುಂಬಿದರು. ಇಲ್ಲಿ ಒಂದು ವಿಷಯವನ್ನು ನೆನಪಿಸಲೇಬೇಕು. ಕಾರ್ಯಕರ್ತರ ರಕ್ಷಣೆಗೆ ಮತ್ತು ಆರ್ಥಿಕ ಸಹಾಯದ ಖರ್ಚನ್ನು ಕಾರ್ಯಕರ್ತರ ಜೊತೆ ಸೇರಿ ಇವರ ಮುಂದಾಳತ್ವದಲ್ಲಿ  ಬರಿಸಿದ್ದರು.! ಅಷ್ಟೇ ಅಲ್ಲದೇ ಕರಾವಳಿಯನ್ನು  ಬೆಚ್ಚಿ ಬೀಳಿಸಿದ ಘಟನೆಯಾದ ಮತಾಂಧ ಶಕ್ತಿಗಳ ಕೈಯಲ್ಲಿ ಬಲಿಯಾದ ಅನಂತು ಅವರ ಪಾರ್ಥಿವ ಶರೀರವನ್ನು ಮನೆಗೆ ಕೊಂಡೊಯ್ಯುವಾಗ ನಡೆದ ದಾಳಿಯನ್ನು ಸಮರ್ಥವಾಗಿ ಎದುರಿಸಿ ,ಲಾಠಿ ಚಾರ್ಚ್  ಗೆ ಬಗ್ಗದೆ ಪಾರ್ಥಿವ ಶರೀರವನ್ನು ಅವರ ಮನೆಗೆ ತಲುಪಿಸಿದರು. ಅಲ್ಲಿಗೆ ಕೈ ಕಟ್ಟಿ ಕುಳಿತುಕೊಳ್ಳಲಿಲ್ಲ ಸತ್ಯಣ್ಣ, ಹಿಂದೂ ಜಾಗರಣ ವೇದಿಕೆಯ ಮುಖಾಂತರ ಒಂದು ಮನೆಯನ್ನು ಕೂಡ ನಿರ್ಮಿಸಿದರು. ಅದರ ಜೊತೆಗೆ ಪೊಳಲಿ ದೇವಸ್ಥಾನದ ಬಳಿಯಲ್ಲಿ ಅಂಗಡಿ ತೆರೆದು, ಅದರಲ್ಲಿ ಬರುವ ಬಾಡಿಗೆ ಆದಾಯವನ್ನು ಕುಟುಂಬಕ್ಕೆ ದೊರೆಯುವಂತೆ  ಹಿಂದು ಸಮಾಜದ ಸಹಕಾರದೊಂದಿಗೆ ಮಾಡಿಸಿ ಕೊಟ್ಟರು.

   ಮತಾಂದ ಶಕ್ತಿಗಳ ಕೈಯಲ್ಲಿ ಬಲಿಯಾದ ಕ್ಯಾಂಡಲ್ ಸಂತು ಅವರ ಸಹೋದರಿಯರ ಮದುವೆಯನ್ನು ಕೂಡಾ ಸತ್ಯಣ್ಣನ್ನನ ಮುಂದಾಳತ್ವದಲ್ಲಿ ಕಾರ್ಯಕರ್ತರ ಜೊತೆ ಸೇರಿ ಮಾಡಿಸಿ, ಮುಂದೆ ಮನೆ ಕೂಡ ಅವರಿಗೆ ನಿರ್ಮಿಸಿ ಕೊಟ್ಟರು. ಹಾಗೆಯೇ

  ಪೊಳಲಿ ಸಂತೋಷ್ ಶೆಟ್ಟಿಯ ಕುಟುಂಬಕ್ಕೆ ಮನೆ ನಿರ್ಮಾಣವನ್ನು ಕೂಡ ಮಾಡಿ, ಅದರ ಖರ್ಚನ್ನೂ ಕೂಡ ಅಣ್ಣನ ಕರೆಗೆ ಓಗೊಟ್ಟು ಸಮಾಜ ಬರಿಸಿತು. ಮಂಜುನಾಥ ಬಜಿಲಕೇರಿ (ಕಡ್ಲೆ ಮಂಜು) ಯವರ ಮನೆಯವರ ಚಿಕಿತ್ಸೆಯ ಜವಾಬ್ದಾರಿಯ ಜೊತೆಗೆ ಆರ್ಥಿಕ ಸಹಾಯವನ್ನೂ ಕೂಡ ಸತ್ಯಣ್ಣನ ಮುಂದಾಳತ್ವದಲ್ಲಿ  ಮಾಡಲಾಯಿತು. ಹೇಡಿಗಳ ಕೈಯಲ್ಲಿ ವೀರ ಮರಣ ಅಪ್ಪಿದ ಸುಖಾನಂದ ಶೆಟ್ಟಿಯ ಅಂತಿಮ ಯಾತ್ರೆಯ ಸಂಧರ್ಭದಲ್ಲಿ ಪೋಲಿಸರ ಗೋಲಿಬಾರ್ ಗೆ ಬಲಿಯಾದ ದಿನೇಶ್ ಮತ್ತು ಪ್ರೇಮ್ ಅವರ ಕುಟುಂಬಕ್ಕೆ ಆರ್ಥಿಕ ಸಹಾಯದ ಜೊತೆಗೆ ಕೇಸಿನ ನಿರ್ವಹಣೆಯನ್ನು ನೋಡಿಕೊಂಡರು. ಮುಂದಿನ 6 ತಿಂಗಳಿನಲ್ಲಿ ಮುಲ್ಕಿಯಲ್ಲಿ ಮೊದಲಿಕ್ಕಿಂತಲು ಬಲಿಷ್ಟವಾಗಿ ಸಂಘಟನೆಯನ್ನು ನಿರ್ಮಾಣ ಮಾಡಿ, ಹಿಂದು ಯುವಕರ ಎದೆಯಲ್ಲಿ ಇದ್ದ ಭಯದ ವಾತಾವರಣವನ್ನು ಹೋಗಲಾಡಿಸಿದರು.

   MSEZ ಎಂಬ ಖಾಸಗಿ ಕಂಪನಿಯು ಒಪ್ಪಂದದಂತೆ ನಿರಾಶ್ರಿತರಿಗೆ ಉದ್ಯೋಗವನ್ನು ನೀಡದಿದ್ದಾಗ ಸುದೀರ್ಘ 2 ತಿಂಗಳ ಕಾಲ ಯಶಸ್ವಿ ಹೋರಾಟ ಮಾಡಿ, ಅದರಲ್ಲೂ ಯಶಸ್ವಿಯಾಗಿ, ಸುಮಾರು 500 ಯುವಕರಿಗೆ ಉದ್ಯೋಗವನ್ನು ಕೂಡ ದೊರಕಿಸಿ ಕೊಟ್ಟರು.

   MRPL,OMPL ಮತ್ತು NMPT ಎಂಬ ಖಾಸಗಿ ಸಂಸ್ಥೆಗಳ ಯೂನಿಯನ್ ಒಕ್ಕೂಟದಲ್ಲಿ ಜವಾಬ್ದಾರಿಯನ್ನು ಕೂಡ ವಹಿಸಿಕೊಂಡ ಸತ್ಯಣ್ಣ , ಅನೇಕ ಗುತ್ತಿಗೆ ಮತ್ತು ನೇರ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರವನ್ನು ಕೂಡ ನೀಡಿದರು.

  ರಾಜ್ಯಾದ್ಯಂತ ರಾತ್ರಿ ಹಗಲೆನ್ನದೆ ಕೊಡಗು, ಚಿಕ್ಕಮಗಳೂರು, ಉಡುಪಿ, ದಾವಣಗೆರೆ, ಮುಧೋಳ, ಭಟ್ಕಳ ಮುಂತಾದ ನೂರಾರು ಕಡೆ ನಡೆದ ಹೋರಾಟವನ್ನು ಮುನ್ನಡೆಸಿದ ಹೆಗ್ಗಳಿಕೆ ಇವರದು.

   1992 ರ ಅಯೋಧ್ಯಾ ಚಳುವಳಿಯಲ್ಲಿ ಅಯೋಧ್ಯೆಯಲ್ಲಿ ನಿಂತು ಸಕ್ರೀಯವಾಗಿ ಒಂದು ಗುಂಪಿನ ಜೊತೆ ತನ್ನ ಕಾರ್ಯವನ್ನು ಸದ್ದಿಲ್ಲದೆ ಮುಗಿಸಿದರು.

 ಸತ್ಯಣ್ಣ ಯಾವುದೇ ಸಮಯದಲ್ಲೂ ಹಿಂದು ಸಮಾಜದ ವಿರುದ್ಧ ನಡೆದ ಘಟನೆಯನ್ನು ಕಟುವಾಗಿ ಟೀಕಿಸಿದರಲ್ಲಿ ಮೊದಲಿಗರು, ಹಿಂದು ಸಮಾಜದ ಧ್ವನಿಯಾಗಿ ಮತ್ತು ಶಕ್ತಿಯಾಗಿ ಎದುರಿಗೆ ನಿಂತವರು ಈ ಸತ್ಯಣ್ಣ..

   ಬರೆದಷ್ಟು ಮುಗಿಯದ ಸಹಾಯಗಳು, ಅದೆಷ್ಟೊ ಹೋರಾಟಗಳು,ರಾತ್ರಿ ಹಗಲೆನ್ನದೆ ಮಿಡಿವ ಈ ಅಣ್ಣನ ಕಾರ್ಯಗಳನ್ನು ಬರೆಯಲು ಕೂತರೆ ಒಂದು ಬೃಹತ್ ಗಧ್ಯವನ್ನೇ ಹೊರತರಬಹುದು.!! ಕೆದಕಿದಷ್ಟು ಮಾನವೀಯ ಮೌಲ್ಯ, ಹೋರಾಟದ ಪ್ರತೀ ಘಟನೆಗಳು ಕಣ್ಣ ಮುಂದೆಯೇ ಬಂದು ಹೋಗಿರುತ್ತವೆ.

   ಸೈನಿಕರ ಮೇಲೆ ಇರುವ ಇವರ ಅಗಾಧ ಪ್ರೀತಿ ಮತ್ತು ಗೌರವಕ್ಕಾಗಿ "ರಾಷ್ಟ್ರ ಭಕ್ತ ನಾಗರಿಕ ವೇದಿಕೆ" ಎಂಬ ಒಂದು ತಂಡ ರಚಿಸಿ, ಅದರಲ್ಲಿ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿರುವ ಇವರು, ಸೇನೆಯಲ್ಲಿ ಕಾರ್ಯನಿರ್ವಹಿಸಿ ಶಾಶ್ವತ ಅಂಗವೈಕಲ್ಯ ಮತ್ತು ಯಾವುದೇ ರೀತಿಯ ದೈಹಿಕ ತೊಂದರೆಯಾದ ಕುಟುಂಬಕ್ಕೆ ವಾರ್ಷಿಕವಾಗಿ ಲಕ್ಷಾಂತರ ಧನ ಸಹಾಯವನ್ನು ನೀಡುತ್ತಾ, ವೀರ ಯೋಧರಿಗೆ ಸನ್ಮಾನಗಳನ್ನು ಮಾಡುತ್ತ ಸೈನಿಕರ ದೇಶ ಪ್ರೇಮಕ್ಕೆ ತನ್ನ ಪ್ರೀತಿಯ ಅಭಿಮಾನವನ್ನು ನೀಡುತ್ತಾ ಬರುತ್ತಿದ್ದಾರೆ.

 ಸತ್ಯಜಿತ್ ಸುರತ್ಕಲ್ ಎನ್ನುವ ಹೆಸರೇ ಒಂದು  ಧೈರ್ಯದಂತೆ.! ಅಣ್ಣನ ನೆರಳಿನಲ್ಲಿ ಅದೆಷ್ಟೋ ಜೀವಗಳು ಇಂದು ಬೆಳಕನ್ನು ಕಂಡಿದೆ ಎಂದರೆ ತಪ್ಪಾಗಲಾರದು.!

     ಸತ್ಯಣ್ಣ ಎಂದಿಗೂ ಪ್ರಚಾರವನ್ನು ಬಯಸಲಿಲ್ಲ. ಅವರ ಹೋರಾಟಗಳು, ಧೈರ್ಯದ ಮಾತುಗಳು ಎಲ್ಲರ ಮನದಲ್ಲಿ ಅಚಲವಾಗಿ ನಿಂತಿತು. ನಿನ್ನೆ ಮುನ್ನೆ ಬಂದ ಹಲವಾರು ನಾಯಕರು ಇಂದು ಕೆಲವು ಪಕ್ಷದಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದಾರೆ. ಆದರೆ ಸತ್ಯಣ್ಣ..!?? ಇವರ ಜೊತೆ ಜೊತೆಗಾರರಾಗಿದ್ದವರು ಕೂಡ ಇಂದು ಕೇಂದ್ರ ಸರಕಾರದಲ್ಲಿ ಸಂಸದರಾಗಿ, ಸಚಿವರಾಗಿ ಗುರುತಿಸಿಕೊಂಡಿದ್ದಾರೆ.

  ಪ್ರತೀ ದಿನ, ಪ್ರತೀ ಕ್ಷಣ ಧರ್ಮದ ಉಳಿವಿಗಾಗಿ ಹೋರಾಟ ಮಾಡಿದ ಸತ್ಯಣ್ಣನಿಗೆ ಅಂತಹ ಅವಕಾಶವೇ ದೊರೆಯಲಿಲ್ಲ.! ರಾಜಕೀಯದ ಕಡೆ ಮುಖ ಮಾಡಿದರೆ ನಕಲಿ ನಾಯಕರ ಬಣ್ಣ ಬಯಲಾಗುತ್ತದೆ ಎಂಬ ಕಾರಣದಿಂದಲೂ ಗೊತ್ತಿಲ್ಲ, ಯಾರೋ ಅವಕಾಶವನ್ನು ತಪ್ಪುವಂತೆ ಮಾಡುತ್ತಿದ್ದರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದು ಏನೇ ಇರಲಿ ಸತ್ಯಣ್ಣನಿಗೆ ಇರುವಷ್ಟು ನಂಬಿಕೆಯ ಕಾರ್ಯಕರ್ತರ ಪಡೆ ಕರಾವಳಿಯಲ್ಲಿ ಯಾವ ನಾಯಕನಿಗೂ ಇಲ್ಲಾ.ಅದು ಮುಂದೆಯೂ ಇರಲು ಸಾಧ್ಯವಿಲ್ಲ..!

  ಇಲ್ಲಿ ಜಾತಿ ಎಂಬ ಗೋಡೆ ಅಡ್ಡ ಬಂತೋ ಅಥವಾ ಕಟ್ಟರ್ ಹಿಂದುತ್ವವಾದಿ ಎಂಬ ಅಡಿ ಬರಹ ಅಡ್ಡ ಬಂತೋ ಗೊತ್ತಿಲ್ಲಾ..!?? ಒಂದಂತು ಸತ್ಯ ಸತ್ಯಣ್ಣನಿಗೆ ಸರಿ ಸಮಾನವಾದ ಇನ್ನೊಬ್ಬ ನಾಯಕನನ್ನು ಕರಾವಳಿಯಲ್ಲಿ ಕಾಣಲು ತುಂಬಾ ಕಷ್ಟ ..!

ಹಿಂದೂ ಸಮಾಜದ ಧ್ವನಿಯಾಗಿ, ಶಕ್ತಿ ತುಂಬಿದ್ದ ಸತ್ಯಣ್ಣನ ರಾಜಕೀಯ  ಜೀವನಕ್ಕೆ ಧ್ವನಿಯಾಗಿ ನಾವು ನಿಲ್ಲುವ ಕಾಲ ಘಟ್ಟದಲ್ಲಿದ್ದೇವೆ.ಅವರ ಮುಂದಿನ ರಾಜಕೀಯ ಭವಿಷ್ಯದ  ದಾರಿಗಳು ಉಜ್ವಲವಾಗಲೆಂದು ಹಾರೈಸುವವರು ನಾವಾಗುವ ಎಂಬುದೇ ನಮ್ಮ ಆಶಯ.

ಇದು ಸತ್ಯಣ್ಣನ ಬದುಕಿನ ಪುಸ್ತಕದ ಕೆಲವು ಪುಟಗಳಷ್ಟೇ, ಇನ್ನುಳಿದವು ಇತಿಹಾಸ.

 ಬರಹ :ವಿಜೇತ್ ಪೂಜಾರಿ ಶಿಬಾಜೆ 

Comments

Popular posts from this blog

ಸೌರಜ್ ಮಂಗಳೂರು

Shrikanth shetty- ಶ್ರೀಕಾಂತ್ ಅಣ್ಣ

ಶ್ರೀ ಕೆ. ಚಿತ್ತರಂಜನ್ ಕಂಕನಾಡಿ