Posts

Shrikanth shetty- ಶ್ರೀಕಾಂತ್ ಅಣ್ಣ

ಶಕ್ತಿ ಪರಿಚಯ Shrikanth shetty ರಾಷ್ಟ್ರೀಯತೆಯ ಪ್ರಬಲ ಸಮರ್ಥಕ..  ಇತಿಹಾಸ ಬಗೆದಷ್ಟು , ಕೆದಕಿದಷ್ಟು  ಸತ್ಯತೆ ಮತ್ತು ಸ್ವಾಭಿಮಾನದ ಕಥಾನಕವನ್ನು ತನ್ನ ಒಡಲಲ್ಲಿ ಹುದುಗಿಸಿದೆ..!! ಇದರಲ್ಲಿ ನಾವು ತಿಳಿದ ಸತ್ಯಾಸತ್ಯತೆ ಅದೆಷ್ಟೋ..? ತಿಳಿದ ಸತ್ಯದಲ್ಲಿ ಅದು ಸತ್ಯವೇ ಎಂದು ನಂಬುವಷ್ಟು ಮೂರ್ಖರಾಗಿದ್ದೇವೆ..! ಇಂತಹ ಹಲವಾರು ಇತಿಹಾಸಗಳು, ಭಯಾನಕ ರಕ್ತ ಚರಿತ್ರೆಗಳು ತನ್ನ  ಬೆನ್ನ ಹಿಂದ ನಡೆದಿದ್ದರೂ ಅದರ ಗೊಡವೆಗೆ ಹೋಗದೆ ಸುಮ್ಮನಿದ್ದವರು ನಾವುಗಳೇ.    ಎಲ್ಲಿ ಯಾರೀರಲಿ, ಯಾರೇ ಕೂಗಾಡಲಿ ವೇದಿಕೆಯ ಕಡೆಗೆ ಸಾಗಿದರೆ ಸಭಾ ಗೃಹದಲ್ಲಿ ಇತಿಹಾಸವು ಕಣ್ಣ ಮುಂದೆಯೇ ನಿಲ್ಲುವುದು.ಪ್ರತೀ ಪ್ರಶ್ನೆಗೆ ತೀಕ್ಷ್ಣ ಉತ್ತರವನ್ನು ನೀಡುತ್ತಾ , ಯುವಕರ ಎದೆಯಲ್ಲಿ ದೇಶ ಭಕ್ತಿಯ ಜೊತೆಗೆ ಧರ್ಮದ ಧರ್ಮ ನಡೆಯನ್ನು ವಿಸ್ತಾರವಾಗಿ ಬಣ್ಣ ಹಚ್ಚುವಂತಹ ವಾಕ್ ಚತುರರಿವರು.    ಇಲ್ಲಿ ಎಲ್ಲರೂ ಮಾತನಾಡುವವರೆ, ಅದರಲ್ಲಿ ಕೆಲವರು ಸಭೆಯ ಆ ಕ್ಷಣದ ವೈಭವಕ್ಕೆ ಬಣ್ಣ ಹಚ್ಚುವವರು. ಆದರೆ ಶ್ರೀಕಾಂತ್ ಅಣ್ಣ ಮಾತಿನ ಜೊತೆಗೆ ಸಭೆಯ ಆ ಕ್ಷಣದ ಗತ ವೈಭವದ ಜೊತೆಗೆ ಶತಮಾನದ ವೈಭವವನ್ನು ಕಣ್ಣ ಮುಂದೆ ತಂದು, ಅದು ಕೆಲವು ದಿನಗಳವರೆಗೂ ಯುವಕರ ಎದೆಯಲ್ಲಿ ಪಂಜಿನ ಬೆಳಕಿನ ಶಾಖವನ್ನು ತಟ್ಟುವವರು..!!    ಅರ್ಬಿ ಮನೆ  ಇಂದಿರಾ ಶೆಟ್ಟಿಯವರ ಇಬ್ಬರು ಮಕ್ಕಳಲ್ಲಿ ಮೊದಲನೆಯವರಾಗಿ ಕಾರ್ಕಳ ತಾಲೂಕಿನ ಎಣ್ಣೆಹೊಳೆ( ಎನ್ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ಅವರ ಊರು)  ಗ್ರಾಮದಲ್ಲಿ ಜನ

ಶ್ರೀ ಕೆ. ಚಿತ್ತರಂಜನ್ ಕಂಕನಾಡಿ

ಶಕ್ತಿ ಪರಿಚಯ - ಶ್ರೀ ಕೆ. ಚಿತ್ತರಂಜನ್ ಕಂಕನಾಡಿ ಗರೋಡಿಗಳ ಪುನರುಜ್ಜೀವನದ ಪಿತಾಮಹ ಬರಹ : ವಿಜೇತ್ ಪೂಜಾರಿ ಶಿಬಾಜೆ  ತುಳುನಾಡಿನ ಪ್ರತಿಯೊಂದು ಮನೆತನ ಒಂದು ವಿಶಿಷ್ಟ ಆಚರಣೆಯ ತತ್ವದೊಂದಿಗೆ ನಂಬಿಕೆಯನ್ನೇ ಮೂಲ ಶಕ್ತಿಯನ್ನಾಗಿ ಅಂಗೈಯಲ್ಲಿ ಹಿಡಿದಿಟ್ಟುಕೊಂಡು ಮುಂದೆ ಸಾಗಿದ ಪೀಳಿಗೆ ನಮ್ಮದು.    ಬದುಕಿನ ಉದ್ದಕ್ಕೂ ಕಾರಣಗಳನ್ನು ಹುಡುಕುತ್ತಾ ಹೋದರೆ ಬದುಕು ಬದುಕಾಗಿ ಉಳಿಯುವುದು. ಆ ಕಾರಣಗಳಿಗೆ ಉತ್ತರವನ್ನು ಕಂಡುಕೊಳ್ಳುವತ್ತಾ ಸಾಗಿದರೆ ಆ ಬದುಕು ಇನ್ನೊಬ್ಬರಿಗೆ ಪ್ರೇರಣೆಯಾಗುವುದು. ಇಂತಹ ಪ್ರೇರಣದಾಯಕ ವ್ಯಕ್ತಿತ್ವದ ರೂಪವೇ ಚಿತ್ತರಂಜನ್ ಕಂಕನಾಡಿ.    ನಮ್ಮ ಸಂಸ್ಕೃತಿ ಉಳಿದರೆ, ನಾವು ಉಳಿದೆವು.! ಅದರೊಟ್ಟಿಗೆ ನಮ್ಮತನ ಉಳಿಯುವುದು ಎಂಬ ಉಕ್ತಿಯಂತೆ, ಹಲವಾರು ಗರೋಡಿಗಳ ಪುನರುಜ್ಜೀವನಕ್ಕೆ ತನ್ನ ಪೂರ್ಣ ಹಸ್ತದ ಸಹಕಾರವನ್ನು ನೀಡಿದಂತಹ ಮೇರು ವ್ಯಕ್ತಿತ್ವ ಇವರದ್ದು.   ಕರಾವಳಿ ಭಾಗದಲ್ಲಿ ದೈವಗಳ ಕ್ಷೇತ್ರಗಳಲ್ಲಿ ಚಿತ್ತರಂಜನ್ ಕಂಕನಾಡಿ ಎಂಬ ಹೆಸರಿಗೆ ಒಂದು ಗೌರವದ ತೂಕವಿದೆ. ಆ ತೂಕಕ್ಕೆ ಅಷ್ಟೇ ಮೌಲ್ಯವಿದೆ.!     ಕರಾವಳಿಯ ಪ್ರತಿಯೊಂದು ದಿನಚರಿ ನಮ್ಮ ಸಂಸ್ಕೃತಿಯ ಬೇರಿನಿಂದ ಬಂದಂತಹ ಆಚರಣೆಗಳಾಗಿವೆ. ಅಂತಹ ಆಚರಣೆಗಳ ಒಂದು ಬಲವಾದ ಮೂಲವೇ ಗರೋಡಿಗಳು ಎಂದರೆ ತಪ್ಪಾಗಲಾರದು. ಇದು ತುಳುವ ಮಣ್ಣಿನ ಘಮವನ್ನು ಅನಾದಿ ಕಾಲದಿಂದಲೂ ಪಸರಿಸುತ್ತಲೇ ಬಂದಿರುವ ದಿವ್ಯ ಕೇಂದ್ರಗಳಾಗಿವೆ. ಇಂತಹ ಹಲವಾರು ಗರೋಡಿಗಳ ಏಳಿಗೆಗಾಗಿ ಹಗಲಿರುಳು ಎನ್

ಸೌರಜ್ ಮಂಗಳೂರು

ಶಕ್ತಿ ಪರಿಚಯ ಸೌರಜ್ ಮಂಗಳೂರು ಮಾನವೀಯತೆಯ ಆಪತ್ಪಾಂದವ* ನಮ್ಮ ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳಿಂದ ಉತ್ತರವೂ ದೊರೆಯುತ್ತದೆ ಇಲ್ಲವಾದರೆ ಆ ಉತ್ತರದಿಂದ ಇನ್ನೊಂದು ಪ್ರಶ್ನೆಯ ಮರು ಹುಟ್ಟಿಗೆ ಕಾರಣವಾಗುತ್ತದೆ.   ಕೆಲವೊಂದು ಬಾರಿ ಜೀವನದಲ್ಲಿ ನಡೆದ  ಘಟನೆಗಳೇ ನಮ್ಮ ಜೀವನದ ಪಥವನ್ನು ಬದಲಿಸಿ ಬಿಡಬಹುದು    ನಾವು ನಮ್ಮ ಸಮಾಜ ಬದಲಾಗಬೇಕೆಂದು ಕಾದು ಕುಳಿತರೆ ಶತಮಾನಗಳು ಕಳೆದರು ಒಂದಿಂಚು ಬದಲಾಗಲು ಸಾಧ್ಯವಿಲ್ಲ. ಆದರೆ ನಮ್ಮಿಂದ ಸಮಾಜ ಬದಲಾಗಬೇಕೆಂಬ ದೃಢ ಹೆಜ್ಜೆಯನ್ನು ಇಟ್ಟಾಗ, ಸಮಾಜ ತನ್ನಿಂದಾನೆ  ರವಿಯ ಕಿರಣಗಳಿಗೆ ತಲೆಯನ್ನು ಸವರಿದಂತೆ ಮತ್ತು ಬದಲಾವಣೆಯ ಪರ್ವಗಳಿಗೆ ಇತರರಿಗೆ ಪ್ರೇರಣೆಯನ್ನು ಒದಗಿಸುತ್ತದೆ.     ನಮ್ಮೆದುರಿಗೆ ಸಮಾಜದಲ್ಲಿ ನಡೆಯುವ ಕೆಲವು ತಪ್ಪುಗಳನ್ನು ಕಂಡು ನಾವು ಕಣ್ಣಿದ್ದು ಕುರುಡಾರುಗುವ ಪ್ರಮೇಯವೇ ಇಂದು ಜಾಸ್ತಿಯಾಗಿದೆ. ಆ ಕುರುಡುತನ ಎಲ್ಲರಲ್ಲೂ ಅಂಧಕಾರದ ಭ್ರಮೆಯ ಲೋಕದಲ್ಲಿ ಬದುಕುವಂತೆ ಮಾಡುತ್ತದೆ.  ಅಂತಹ ಅಂಧಕಾರದ ಭ್ರಮೆಯನ್ನು ಸರಿಸಿದಾಗ, ಅದರ ವಿರುದ್ಧ ಪ್ರಶ್ನೆ ಮಾಡಿದಾಗ ಮಾತ್ರ ನಮ್ಮ ಸಮಾಜ ನಿಧಾನವಾಗಿ, ವಿಶಾಲವಾಗಿ ಆಲೋಚಿಸುವಂತೆ ಮಾಡುತ್ತದೆ.    ಸಮಾಜದಲ್ಲಿ ನಡೆಯುವ ಹಲವಾರು ಸಮಸ್ಯೆಗಳಿಗೆ ಧೃಢವಾಗಿ ನಿಂತು ಪ್ರಶ್ನೆ ಮಾಡಿದವರ ಸಾಲಿನಲ್ಲಿ ಮಂಗಳೂರಿನ ಸೌರಜ್ ಅಣ್ಣ ಮೊದಲಿಗರು.   ದಿ. ಮೋಹನ್ ಮತ್ತು ಶ್ರೀಮತಿ ಕುಶಲ ದಂಪತಿಯ ಮಗನಾಗಿ ಮಂಗಳೂರಿನ ಹೊಯ್ಗೆ ಬಜಾರಿನಲ್ಲಿ ಜನಿಸಿದ ಇವರು, ಮೂರು

ಸತ್ಯಜಿತ್ ಸುರತ್ಕಲ್

ಸತ್ಯಜಿತ್ ಸುರತ್ಕಲ್  ಕರಾವಳಿ ಧರ್ಮದ ಉಳಿವಿಗಾಗಿ ಮತ್ತು ಮಣ್ಣಿನ ಘನತೆಗಾಗಿ ಎಂದಿಗೂ ರಾಜಿ ಆದ ಇತಿಹಾಸವೇ ಇಲ್ಲ. ಉಳಿವಿಗಾಗಿ ಮತ್ತು ಘನತೆಗಾಗಿ ರಕ್ತವನ್ನೇ ಚೆಲ್ಲಿ, ಅದರಲ್ಲಿಯೇ ಶುದ್ಧ ಮಾಡಿದ ಪರಂಪರೆಯ ಹಿನ್ನೋಟವೇ ನಮ್ಮ ಮುಂದೆ ಇದೆ. ಧರ್ಮದ ಮೇಲೆ ನಡೆಯುವ ಪೈಶಾಚಿಕ ಘಟನೆಗಳು ನಮ್ಮನ್ನು ಒಗ್ಗಟ್ಟು ಮಾಡುವುದಕ್ಕಿಂತ, ಅದನ್ನು ಎದುರಿಸಿ, ತಡೆದು ಅದರ ವಿರುದ್ಧ ಒಗ್ಗಟ್ಟು ಪ್ರದರ್ಶನ ಮಾಡುವಂತೆ ಮಾಡುವ ನಾಯಕನಿರುವಾಗ ಮಾತ್ರ ನಾವು ಇನ್ನು ಬಲಾಢ್ಯರಾಗುತ್ತೇವೆ.! ಮತ್ತೇ ಎದ್ದೇಳುತ್ತೇವೆ.!     ಸಂಘಟನೆ ಮತ್ತು ಒಂದು ಬಲಾಢ್ಯ ಯುವ ಸಮುದಾಯವನ್ನು ಚಾಕಚಕ್ಯತೆಯಿಂದ ಮುನ್ನಡೆಸಿಕೊಂಡು ಹೋಗುವ ವಿಶಾಲ ಮತ್ತು ನಿಸ್ವಾರ್ಥ ಗುಣವೇ ನಾಯಕನಿಗಿರುವ ಶಕ್ತಿ. ಯಾವುದೇ ಕಠಿಣ ಸಂದರ್ಭ ಎದುರಾದರೂ ಅದನ್ನು ಚಾಣಾಕ್ಷತನದಿಂದ ಎದುರಿಸಿ, ತನ್ನ ಜೊತೆ ಇರುವ ಸಂಘಟನಾ ಸದಸ್ಯರ ಬೆನ್ನಿಗೆ ನಿಲ್ಲುವಂತಹ ಗುಣ,ಅವಮಾನಗಳಿಗೆ, ಬೆದರಿಕೆಗಳಿಗೆ ಸ್ಪಷ್ಟ ಮತ್ತು ಕಠಿಣ ಸಂದೇಶ ನೀಡುವ ವ್ಯಕ್ತಿತ್ವ ನಮ್ಮ ಸತ್ಯಣ್ಣನಲ್ಲಿದೆ.!     ಸತ್ಯಣ್ಣ.!!!( ಸತ್ಯಜಿತ್ ಸುರತ್ಕಲ್) ಈ ಹೆಸರು ಕೇಳಿದಾಗಲೇ ಧನಾತ್ಮಕ ಅಂಶಗಳು ಮತ್ತು ಅಣ್ಣನ ನೇತೃತ್ವದಲ್ಲಿ ನಡೆದ ಹಲವು ಹೋರಾಟದ ಪ್ರಮುಖ ಘಟನೆಗಳು ಕಣ್ಣ ಮುಂದೆಯೇ ತನ್ನ ಚಿತ್ರವನ್ನು ಒಂದೇ ಚಿತ್ರದಲ್ಲಿ ವಿವರಿಸುತ್ತದೆ.     ವಾಸುದೇವ ಮತ್ತು ಭಾರತೀಯವರ ಮಗನಾಗಿ ಸುರತ್ಕಲ್ನಲ್ಲಿ ಜನಿಸಿದ ಇವರು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು